ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನು ಡಿಸೆಂಬರ್ 24, 2025 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರವಾರದ ಪ್ರಜಾ ಸೌಧ ಕಟ್ಟಡದ ಬಳಿ, ಉಪ ನೋಂದಣಿ ಇಲಾಖೆ ಎದುರುಗಡೆ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿದ್ದು, 14 ರಿಂದ 18 ವರ್ಷ ವಯೋಮಾನದ ಬಾಲಕ–ಬಾಲಕಿಯರಿಗೆ ಫ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆ, 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಫ್ರೀ ಹ್ಯಾಂಡ್ ರಂಗೋಲಿ ಹಾಗೂ ಹೂವಿನ ರಂಗೋಲಿ (ಫ್ಲವರ್ ರಂಗೋಲಿ) ಸ್ಪರ್ಧೆಗಳು ನಡೆಯಲಿವೆ.
ರಂಗೋಲಿ ಹಾಕಲು ಅಗತ್ಯವಾದ ಬಣ್ಣದ ಪುಡಿ, ಹೂಗಳು ಹಾಗೂ ಇತರೆ ಪರಿಕರಗಳನ್ನು ಸ್ಪರ್ಧಾಳುಗಳು ತಾವೇ ತೆಗೆದುಕೊಂಡು ಬರಬೇಕಾಗಿದ್ದು, ದೇವರ ಧಾರ್ಮಿಕ ಚಿತ್ರಗಳು ಹಾಗೂ ಕೋಮು ಭಾವನೆಗಳನ್ನು ಬಿಂಬಿಸುವಂತಹ ಚಿತ್ರಗಳನ್ನು ಬಿಡಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನೋಂದಣಿ ಜೇಷ್ಠತೆಯ ಆಧಾರದ ಮೇಲೆ ಸ್ಪರ್ಧೆಗೆ ಅವಕಾಶ ನೀಡಲಾಗುತ್ತಿದ್ದು, ಸ್ಪರ್ಧಿಗಳಿಗೆ ಗರಿಷ್ಠ 3 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಫಲಕ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಡಿಸೆಂಬರ್ 23, 2025 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್ ನೋಂದಣಿಗಾಗಿ
https://forms.gle/ZGHXDOB72XV9OSD58 ಲಿಂಕ್ ಮೂಲಕ ಹೆಸರು ನೋಂದಾಯಿಸಬಹುದು.
ಈ ಕುರಿತು ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಕಾರವಾರ, ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯ ಯಶಸ್ಸಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

