ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: “ಜೀವ ಉಳಿಸುವ ಕ್ಷಣಗಳಲ್ಲಿ” ಎಂಬಂತೆ ಹಾರವಾಡ ಸಮುದ್ರ ಹತ್ತಿರದ ಗ್ರಾಮದಲ್ಲಿ ನಡೆದಿದೆ ಒಂದು ರೋಚಕ ಘಟನೆ. ಬಲೆಗೆ ಸಿಲುಕಿಕೊಂಡು ಜೀವಮರಣದ ಹೋರಾಟ ನಡೆಸುತ್ತಿದ್ದ ನಾಗರಹಾವನ್ನು ಸ್ಥಳೀಯರು ಹಾಗೂ ಹೆಸ್ಕಾಂ ಸಿಬ್ಬಂದಿಯ ಧೈರ್ಯಶಾಲಿ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಯಿತು.
ಮೂಡೆ ಕಟ್ಟಾ ನಿವಾಸಿ ಹಾಗೂ ಉರಗ ಸಂರಕ್ಷಕ ಪ್ರಶಾಂತ್ ಕಳಸ ಅವರಿಗೆ ಸ್ಥಳೀಯರು ತಕ್ಷಣ ಮಾಹಿತಿ ನೀಡಿದರು. ಕ್ಷಣಮಾತ್ರದಲ್ಲಿ ಸ್ಥಳಕ್ಕಾಗಮಿಸಿದ ಪ್ರಶಾಂತ್ ಕಳಸ ಹಾಗೂ ಗ್ರಾಮಸ್ಥರು ಚುರುಕಿನ ಕಾರ್ಯಾಚರಣೆಯಲ್ಲಿ ಬಲೆಗೆ ಸಿಲುಕಿದ್ದ ನಾಗರಹಾವನ್ನು ಬಚಾವ್ ಮಾಡಿದರು.
ಸಣ್ಣ ಪ್ರಯತ್ನ, ದೊಡ್ಡ ಪರಿಣಾಮ! ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ಸಮೀಪದ ಕಾಡಿನಲ್ಲಿ ಮರಳಿ ಬಿಡುವ ಮೂಲಕ ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವ ಹೆಜ್ಜೆ ಇಡಲಾಯಿತು.
ಹೆಸ್ಕಾಂ ಸಿಬ್ಬಂದಿಯಾಗಿದ್ದರೂ ಉರಗ ಸಂರಕ್ಷಣೆಯತ್ತ ಜೀವಪರವಾದ ಸೇವೆ ನೀಡುತ್ತಿರುವ ಪ್ರಶಾಂತ್ ಕಳಸ ಈಗಾಗಲೇ 40ಕ್ಕೂ ಹೆಚ್ಚು ನಾಗರಹಾವುಗಳು ಹಾಗೂ 25ಕ್ಕೂ ಹೆಚ್ಚು ಹೆಬ್ಬಾವುಗಳನ್ನು ರಕ್ಷಿಸಿರುವುದಾಗಿ ತಿಳಿದುಬಂದಿದೆ. ಸ್ಥಳೀಯರು ಅವರ ಈ ಧೈರ್ಯಶಾಲಿ ಸೇವೆಗೆ ಕೊಂಡಾಡುತ್ತಿದ್ದಾರೆ.
ಗ್ರಾಮಸ್ಥರ ಮಾತು: “ಪ್ರಶಾಂತ್ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಹಾವು ಕಂಡರೆ ಓಡೋಣ ಎಂಬ ಮನೋಭಾವ ಬಿಟ್ಟು, ರಕ್ಷಿಸೋಣ ಅನ್ನೋ ಮನೋಭಾವ ಮೂಡಿಸಿದ್ದಾರೆ!”


