ಹೊನ್ನಾವರ : ತಾಲೂಕಿನ ಹೆರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಕಾರ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯು ಮಹಿಳೆಯೊಬ್ಬಳ ಮಾಂಗಲ್ಯ ಸರ ಹರಿದುಕೊಂಡು ಪರಾರಿಯಾದ ಘಟನೆ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಹೆರಂಗಡಿ ಗುಡ್ಡೆಕೇರಿಯ ಮಾದೇವಿ ರಾಮ ನಾಯ್ಕ ಇವರು ಅಡಕಾರ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಚೈನ್ ಸ್ನಾಚಿಂಗ್ ನಡೆದಿದೆ. ಕಪ್ಪು ಚಡ್ಡಿ ಹಾಗೂ ಬಿಳಿ ಶರ್ಟ್ ಧರಿಸಿದ ಅಪರಿಚಿತ ವ್ಯಕ್ತಿಯೋರ್ವ ಕುತ್ತಿಗೆಯಲ್ಲಿದ್ದ 2.10 ಲಕ್ಷ ಮೌಲ್ಯದ ಮೂರುವರೆ ತೊಲೆಯ ಮಾಂಗಲ್ಯ ಸರ ಹರಿದು ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧ ಪಟ್ಟಂತೆ ಮಹಿಳೆಯು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.


