ಕಾರವಾರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಮಹಾ ಸಮೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯ ಒಟ್ಟು 3,26,860 ಮನೆಗಳ ಸಮೀಕ್ಷೆ ಗುರಿಯಾಗಿದ್ದು, ಇದುವರೆಗೂ 44,464 ಮನೆಗಳ ಮಾಹಿತಿಯನ್ನು ಯಶಸ್ವಿಯಾಗಿ ದಾಖಲಿಸಲಾಗಿದೆ. ಸಮೀಕ್ಷೆ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 2,916 ಬ್ಲಾಕ್‌ಗಳು ರಚನೆಗೊಂಡಿದ್ದು, 3,056 ಗಣತಿದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನವರೆಗೆ ಗುರಿಯ 61% ಸಾಧನೆ ಆಗಿದೆ.
ಸಾಮಾಜಿಕ ಸಮಾನತೆ ಹಾಗೂ ಶಿಕ್ಷಣದ ಭವಿಷ್ಯ ರೂಪಿಸುವಲ್ಲಿ ಪ್ರಮುಖವಾಗಿರುವ ಈ ಸಮೀಕ್ಷೆ ಇನ್ನಷ್ಟು ವೇಗ ಪಡೆದುಕೊಳ್ಳುತ್ತಿದ್ದು, ಜಿಲ್ಲೆಯ ಎಲ್ಲ ಮನೆಗಳ ಮಾಹಿತಿಯನ್ನು ಶೀಘ್ರದಲ್ಲೇ ಸಂಗ್ರಹಿಸುವ ಗುರಿಯಿದೆ.


