ಭಟ್ಕಳ: ತಾಲೂಕಿನ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಅಪರೂಪದ ಹಾಗೂ ವಿಚಿತ್ರ ದೈಹಿಕ ರೂಪದ ಹೆಣ್ಣು ಶಿಶು ಜನಿಸಿದ್ದು, ಇದರಿಂದ ಸ್ಥಳೀಯರಲ್ಲಿ ಕುತೂಹಲ ಹಾಗೂ ಸಂಚಲನ ಮೂಡಿದೆ.
ಮಗುವಿನ ಅಳು, ಧ್ವನಿ ಸಾಮಾನ್ಯ ಶಿಶುವಿನಂತೆಯೇ ಇದ್ದರೂ, ದೇಹದ ಆಕೃತಿ ಅಸಾಮಾನ್ಯವಾಗಿದ್ದು, ನೋಡಿದವರಲ್ಲಿ ಬೆಚ್ಚಿಬೀಳುವಂತಾಗಿದೆ.
ಕೆಲವು ವರ್ಷಗಳಿಂದ ಭಟ್ಕಳದಲ್ಲಿ ವಾಸ್ತವ್ಯ ಹೂಡಿರುವ ಮುಸ್ಲಿಂ ದಂಪತಿಗಳ ಮೂರನೇ ಮಗುವೇ ಈ ರೀತಿಯಲ್ಲಿ ಜನಿಸಿದ್ದು ಎನ್ನಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದ್ದು, ಇತ್ತೀಚಿನ ಚಂದ್ರಗ್ರಹಣದ ಪ್ರಭಾವಕ್ಕೂ ಕೆಲವರು ಇದನ್ನು ಸಂಬಂಧಿಸುತ್ತಿದ್ದಾರೆ. ಆದರೆ ವೈದ್ಯಕೀಯ ವಲಯವು ಇದನ್ನು ಸೃಷ್ಟಿಯ ವೈಚಿತ್ರ್ಯ (congenital anomaly) ಎಂದು ಪರಿಗಣಿಸುತ್ತಿದ್ದು, ಮಗುವಿನ ಚಿಕಿತ್ಸೆ ಸದ್ಯವೂ ಮುಂದುವರಿಯುತ್ತಿದೆ.


