ಶಿರಸಿ: ತಾಲೂಕಿನ ಬೆಣ್ಣೆಹೊಳೆ ಜಲಪಾತದಲ್ಲಿ ನಾಪತ್ತೆಯಾಗಿರುವ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ರಾಹುಲ್ ಅವರ ಶೋಧ ಕಾರ್ಯ ನಾಲ್ಕನೇ ದಿನವೂ ನಿರಂತರವಾಗಿ ಮುಂದುವರಿಯುತ್ತಿದೆ.

ತಜ್ಞರು ಮತ್ತು ಸ್ಥಳೀಯ ಈಜುಗಾರರ ಬೃಹತ್ ಶೋಧದ ಹೊರತಾಗಿಯೂ, ಇನ್ನೂ ಸುಳಿವು ಸಿಕ್ಕಿಲ್ಲ. ನಾಳೆ ಉಡುಪಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವೂ ಆಗಮಿಸಿ ಶೋಧ ಕಾರ್ಯದಲ್ಲಿ ಪಾಲ್ಗೊಳ್ಳಲಿದೆ. ಸದ್ಯ ಉಪ ವಿಭಾಗಾಧಿಕಾರಿ ಕಾವ್ಯರಾಣಿ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಉಡುಪಿಯ ಈಜು ತಜ್ಞ ಈಶ್ವರ ಮಲ್ಪೆ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಗೋಪಾಲ ಗೌಡ ಅವರ ನೇತೃತ್ವದ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಕೂಡ ತಾಲ್ಲೂಕು ಆಡಳಿತಕ್ಕೆ ಸಹಕರಿಸುತ್ತಿದೆ.
ನಾಲ್ಕು ದಿನ ಕಳೆದರೂ ವಿದ್ಯಾರ್ಥಿ ಪತ್ತೆಯಾಗದಿರುವುದು ಪೋಷಕರು ಹಾಗೂ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಶೋಧ ಕಾರ್ಯವನ್ನು ತೀವ್ರಗೊಳಿಸಿರುವ ಆಡಳಿತವು, ಶೀಘ್ರದಲ್ಲೇ ರಾಹುಲ್ ಪತ್ತೆಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

Please Share: