ಕಾರವಾರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಮೀಸಲು ಕ್ಷೇತ್ರವನ್ನಾಗಿ ಮಾಡಬೇಕೆಂದು ಭೀಮ ಘರ್ಜನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಮಿಂಟಿ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ದಲಿತ ಕಾಲೋನಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಮುಂದುವರಿದಿದೆ. ಸಮುದಾಯದ ಹಕ್ಕುಗಳಿಗಾಗಿ ತಮ್ಮ ಸಮುದಾಯದ ಶಾಸಕರೇ ಬರಬೇಕು ಎಂದು ಹೇಳಿದರು.

ಅವರು ಮುಂದುವರಿದು, 2028ರ ಚುನಾವಣೆಗೂ ಮುನ್ನ ಬನವಾಸಿಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಸೇರಿಸಬೇಕು ಎಂದು ಬೇಡಿಕೆ ಇಟ್ಟರು. ಸುಪ್ರೀಂ ಕೋರ್ಟ್ ಸೊಪ್ಪಿನ ಬೆಟ್ಟವನ್ನು ಅರಣ್ಯ ಪ್ರದೇಶವೆಂದು ಘೋಷಿಸಿರುವುದರ ನಡುವೆಯೂ ಅಕ್ರಮವಾಗಿ ಭೂಮಿ ದಾಖಲೆ ಮಾಡಿಕೊಳ್ಳುವವರ ವಿರುದ್ಧ ಕ್ರಮ ತೆಗೆದು ಭೂಹೀನರಿಗೆ ಭೂಮಿ ಹಂಚಬೇಕು ಎಂದರು.

ಶಿರಸಿಯ ಐದು ರಸ್ತೆ ವೃತ್ತವನ್ನು ಅಂಬೇಡ್ಕರ್ ವೃತ್ತವೆಂದು ಹೆಸರಿಸಲಾಗಿದೆ. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು. ಸಂಘಟನೆಯ ಅಮಿತ್ ಜೋಗಳೇಕರ ಮಾತನಾಡಿ, ದಲಿತರ ಮೇಲಿನ ಶೋಷಣೆ ಮುಂದುವರಿದಿದ್ದು, ಮುಖ್ಯವಾಹಿನಿಗೆ ತಲುಪದಂತಹ ಸಂದರ್ಭಗಳಲ್ಲಿ ಭೀಮ ಘರ್ಜನೆ ಸಂಘಟನೆ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

 

 

 

Please Share: