ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಮಾರುತಿ ಗಲ್ಲಿಯ ನಿವಾಸಿ ಪ್ರಜ್ಞೇಶ್ ಪ್ರಕಾಶ ಶೇಟ (45) ಅವರು ಮದುವೆಯಾಗದಿರುವ ನೋವಿನಿಂದ ಮನನೊಂದು ಚಾಕುವಿನಿಂದ ತನಗೆ ತಾನೇ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಮನೆಯಲ್ಲೇ ಚಾಕು ಬಳಸಿ ತಮ್ಮ ದೇಹದ ಭಾಗಕ್ಕೆ ಇರಿತಮಾಡಿಕೊಂಡು ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಪ್ರಜ್ಞೇಶ್ ಅವರನ್ನು ತಕ್ಷಣ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ವೈದ್ಯಕೀಯ ಸಿಬ್ಬಂದಿಗಳ ಸಮಯೋಚಿತ ಚಿಕಿತ್ಸೆಯಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮದುವೆ ಆಗಿಲ್ಲ ಎಂಬ ವಿಷಯವನ್ನು ಪ್ರಜ್ಞೇಶ್ ಹತ್ತಿರದವರಿಗೆ ಹಲವು ಬಾರಿ ಬೇಸರದಿಂದ ಹೇಳಿಕೊಂಡಿದ್ದರು ಎಂದು ಮಾಹಿತಿ ತಿಳಿದುಬಂದಿದೆ. ಈ ಖಿನ್ನತೆಯ ಹಿನ್ನೆಲೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆ ವ್ಯಕ್ತವಾಗಿದೆ.

							
