ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ಪಟ್ಟಣದ ರಾಮತೀರ್ಥ ಕ್ರಾಸ್ ಹತ್ತಿರ ಬುಧವಾರ ಸಂಜೆ ನಡೆದ ಭೀಕರ ಸರಣಿ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಮೃತಪಟ್ಟ ಘಟನೆ ಸಂಚಲನ ಸೃಷ್ಟಿಸಿದೆ.

ಮೃತರನ್ನು ಬೀದರ ಜಿಲ್ಲೆಯ ಸುನೀಲಕುಮಾರ್ ಸಂತೋಷ ಗಾಯಕವಾಡ ಎಂದು ಗುರುತಿಸಲಾಗಿದೆ. ಅವರು ಇತ್ತೀಚೆಗೆ ಕುಮಟಾದಲ್ಲಿ ತಮ್ಮ ಸಹೋದರಿಯೊಂದಿಗೆ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.

ಮೂರು ಬೈಕ್‌ಗಳು ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಸುನೀಲಕುಮಾರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. ಸ್ಥಳೀಯರಲ್ಲಿ ಈ ಘಟನೆ ವಿಷಾದ ಮೂಡಿಸಿದೆ.

 

 

Please Share: