ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತೆರೆದ ಬಾವಿಗೆ ಬಿದ್ದು ಎರಡು ಗಂಡು ಕಡವೆಗಳು ಮೃತಪಟ್ಟಿರುವ ಘಟನೆ ತಾಲೂಕಿನ ಬೈತ್‌ಖೋಲ್ ವ್ಯಾಪ್ತಿಯ ಅಲಿಗದ್ದಾದಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

Banner Ad

ಆಹಾರ ಅರಸಿ ಬಂದಿದ್ದ ಕಡವೆಗಳು ಕಾದಿನಿಂದಾಗಿ ಕಾಲು ಜಾರಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಾವಿಯಲ್ಲಿ ಈ ಹಿಂದೆಯೂ ಜಾನುವಾರುಗಳು ಹಾಗೂ ಕಾಡುಪ್ರಾಣಿಗಳು ಬಿದ್ದು ಮೃತಪಟ್ಟಿದ್ದವು. ಅಲ್ಲದೆ, ಮಹಿಳೆಯೊಬ್ಬರೂ ಇದೇ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಸತತ ಘಟನೆಗಳಿಂದ ಬಾವಿಯ ನೀರು ಕಲುಷಿತಗೊಂಡು ಬಳಕೆಗೆ ಯೋಗ್ಯವಿಲ್ಲದಂತಾಗಿದೆ.

ಇಷ್ಟಾದರೂ ಸಂಬಂಧಪಟ್ಟ ಇಲಾಖೆಯಿಂದ ಬಾವಿಗೆ ತಡೆಗೋಡೆ ನಿರ್ಮಿಸುವ ಕಾರ್ಯ ನಡೆದಿಲ್ಲ. ಕನಿಷ್ಠ ತಂತಿ ಬೇಲಿಯಾದರೂ ಅಳವಡಿಸಿದ್ದರೆ ಇಂತಹ ದುರಂತಗಳನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

Please Share: