ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ಕೇಂದ್ರ ಸಮಿತಿಯ ನಿರ್ದೇಶನದಂತೆ ಸರ್ವಾನುಮತದಿಂದ ರಚಿಸಲಾಗಿದ್ದು, ಅಧ್ಯಕ್ಷರಾಗಿ ಜೈ ರಂಗನಾಥ ಬಿ.ಎಸ್. ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.

Banner Ad

ಉಪಾಧ್ಯಕ್ಷರಾಗಿ ಎಂ.ಡಿ. ಕುಮಠಿ ಹಾಗೂ ಸುಜಾತಾ ರಾಮಾ ನಾಯ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ ಎಸ್. ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಎಂ. ಶಮೀಂದ್ರ, ಖಜಾಂಚಿಯಾಗಿ ಎಂ. ಮಂಜಪ್ಪ, ಸಹ ಕಾರ್ಯದರ್ಶಿಗಳಾಗಿ ವಿಕ್ರಾಂತ ತಾಂಡೇಲ್ ಹಾಗೂ ವಿಕಾಸ ಕೋಟಾರಕರ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೋಭಾ ದೇಸಾಯಿ, ವನಿತಾ ಶೇಟ್, ಸಂಧ್ಯಾ ಗಾಂವಕಾರ, ಮಹೇಶ ಬಿ. ಸಾವಂತ, ರಾಜೇಂದ್ರ ಎಸ್.ಕೆ., ಪ್ರಸನ್ನ ಬಿ., ಸಂದೀಪ ರಾಣೆ, ದಯಾನಂದ ನಾಯ್ಕ, ಅನಿಲ ಸಾವಂತ, ಉಮೇಶ ದೊಡ್ಮನಿ, ಮಾರುತಿ ನಾಯಕ, ಶೈಲೇಶ ನಾಯಕ, ಎಸ್.ವಿ. ಮಿರಾಶಿ, ಆರ್.ವಿ. ದೇಶಭಂಡಾರಿ, ಗಣೇಶ ಬಿಸ್ತಣ್ಣನವರ ಹಾಗೂ ಫ್ರಾನ್ಸಿಸ್ ಫರ್ನಾಂಡಿಸ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರತಿನಿಧಿಗಳಾಗಿ ಮಹದೇವ್ ಎಲ್. ರಾಣಿ ಹಾಗೂ ಸುನಿಲ್ ವಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜೈ ರಂಗನಾಥ ಬಿ.ಎಸ್., 2014-16, 2017-23 ಹಾಗೂ 2023-26ರ ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ಮುಂದಿನ ದಿನಗಳಲ್ಲಿ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸಮಿತಿಯ ಸಹಯೋಗದೊಂದಿಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

 

 

Please Share: