ಕಾರವಾರ:
ಅದ್ದೂರಿಯಾಗಿ ನಡೆಯುತ್ತಿರುವ ಕರಾವಳಿ ಉತ್ಸವವು ಇನ್ನೇನು ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಡಿ.28 ರಂದು ನಡೆಯುವ ಕರಾವಳಿ ಉತ್ಸವದ ಸಮಾರೋಪ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಆಗಮಿಸಲಿದ್ದಾರೆ.
ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಆಗಮಿಸುತ್ತಾರೆ ಎಂದು ಬ್ಯಾನರ್, ಪೋಸ್ಟರ್ ಹಾಗೂ ಭರ್ಜರಿ ಕಟೌಟ್ ಗಳನ್ನು ಹಾಕಲಾಗಿತ್ತು. ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಿಲ್ಲ. ಇದೀಗ ಉಪ ಮುಖ್ಯಮಂತ್ರಿ ಅವರ ಅಧಿಕೃತ ಪ್ರಸಾಸ ಪಟ್ಟಿ ಹೊರಬಿದ್ದಿದೆ. ಡಿ.28 ರಂದು ವಿಮಾನದ ಮೂಲಕ ಗೋವಾ ಬರುವ ಅವರು ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಕಾರವಾರ ಬರಲಿದ್ದಾರೆ. ಬಳಿಕ ಕರಾವಳಿ ಉತ್ಸವದಲ್ಲಿ ಭಾಗಿಯಾಗುವ ಅವರು ಕಾರವಾರದಲ್ಲಿಯೇ ತಂಗಲಿದ್ದಾರೆ. ಡಿ.29 ರಂದು ಮರಳಿ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

