ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ಮೈಸೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ಹೊರಟ ಖಾಸಗಿ ಬಸ್ ಪಲ್ಪಿಯಾಗಿ ಅಪಘಾತ ಸಂಭವಿಸಿದ್ದು, ಹತ್ತನೇ ತರಗತಿ ವಿದ್ಯಾರ್ಥಿ ಪವನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ. ಈ ದುರ್ಘಟನೆ ಗೇರುಸೊಪ್ಪಾ ಸಮೀಪದ ಸುಳೆ ಮೂರ್ಕಿ ಕ್ರಾಸ್‌ನಲ್ಲಿ ರವಿವಾರ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವರು ಮೈಸೂರಿನ ಟೀಕೆ ಲೇವೌಟ್ ಸರಳಬಾಳು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಪ್ರವಾಸಕ್ಕೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.

ಘಟನೆ ಸ್ಥಳಕ್ಕೆ ಸ್ಥಳೀಯ ಪೊಲೀಸರು ತಕ್ಷಣ ಭೇಟಿ ನೀಡಿ, ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಹೊನ್ನಾವರ ಮತ್ತು ಕುಮಟಾ ಆಸ್ಪತ್ರೆಗಳ 108 ಸೇವೆ ಮತ್ತು ಖಾಸಗಿ ಅಂಬ್ಯುಲೆನ್ಸ್‌ ಮೂಲಕ ಗಾಯಗೊಂಡವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳೀಯರು ಈ ಘಟನೆಗೆ ಮುಖ್ಯ ಕಾರಣವಾಗಿ ಈ ರಸ್ತೆಯ ನಿರ್ಲಕ್ಷ್ಯ ಮತ್ತು ಅಪಘಾತ ನಡೆಯುವ ಅಡಚಣೆಗಳ ಕೊರತೆಯನ್ನು ಸೂಚಿಸುತ್ತಿದ್ದಾರೆ. ಈ ದುರ್ಘಟನೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಸ್ಥಳೀಯರು ಅಪಘಾತ ಹೆಚ್ಚು ಸಂಭವಿಸುವ ಈ ಕ್ರಾಸ್‌ ಅನ್ನು ಸುರಕ್ಷಿತಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

 

 

Please Share: