ಕರಾವಳಿ ವಾಯ್ಸ ನ್ಯೂಸ್

ಮುಂಡಗೋಡ: ಇಲ್ಲಿನ ಖಾಸಗಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕನೊಬ್ಬ ಅಪ್ರಾಪ್ತೆ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಈ ಸಂಬಂಧ ವಿದ್ಯಾರ್ಥಿನಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Banner Ad

ಆರೋಪಿತನಾಗಿ ಗುರುತಿಸಲ್ಪಟ್ಟಿರುವ ಕಿರಣ ಟೋಪೋಜಿ, ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಗುರಿಯಾಗಿಸಿಕೊಂಡು ಅವಳ ಮೇಲೆ ಹಲವು ಬಾರಿ ದೌರ್ಜನ್ಯ ಎಸಗಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಬಯಲಾಗುವುದಾದರೆ ಜೀವಹಾನಿ ಮಾಡುವ ಭೀತಿ ಹಾಕುತ್ತಿದ್ದನೆಂಬುದೂ ಕುಟುಂಬದ ದೂರಿನಲ್ಲಿ ಉಲ್ಲೇಖವಾಗಿದೆ.

ದೂರು ಸ್ವೀಕರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಹಿಂದೆ ಮತ್ತೊಂದು ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮತ್ತು ಅಸಭ್ಯ ವರ್ತನೆ ಕುರಿತು ಹಲವು ಆಕ್ಷೇಪಗಳು ಕೇಳಿಬಂದಿದ್ದರಿಂದ ಸಂಸ್ಥೆಯವರು ಕೆಲಸದಿಂದ ದೂರ ಮಾಡಿದ್ದರೆಂದು ಮೂಲಗಳು ತಿಳಿಸಿವೆ. ನಂತರ ಕಳೆದ ವರ್ಷ ಮತ್ತೊಂದು ಪ್ರಸಿದ್ಧ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಸೇರಿದ್ದಾನೆ.

ಇತ್ತೀಚಿನ ದೌರ್ಜನ್ಯ ಆರೋಪದಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ವೇಷದಲ್ಲಿದ್ದ ವ್ಯಕ್ತಿಯ ಈ ವರ್ತನೆ ಶಿಕ್ಷಣ ಕ್ಷೇತ್ರದ ಮೇಲೆ ಕಳಂಕ ತಂದಿದೆ ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

 

 

 

 

Please Share: