ಕರಾವಳಿ ವಾಯ್ಸ್ ನ್ಯೂಸ್

ಹೈದರಾಬಾದ್: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರ ಪ್ರಕರಣದಲ್ಲಿ ತೆಲಂಗಾಣ ಸಿಐಡಿ ಮುಂದೆ ಬುಧವಾರ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.

ಅವರ ಹೇಳಿಕೆಯಲ್ಲಿ, “ನಾನು 2016ರಲ್ಲಿ ಗೇಮಿಂಗ್ ಆ್ಯಪ್‌ ಪ್ರಚಾರ ಮಾಡಿದ್ದೆ, ಆದರೆ ಅದು 2017ರಲ್ಲಿ ಬೆಟ್ಟಿಂಗ್ ಆ್ಯಪ್ ಆಗಿ ಬದಲಾಗಿತ್ತು. ತಕ್ಷಣವೇ ಒಪ್ಪಂದ ರದ್ದು ಮಾಡಿದ್ದೆ. ತಿಳಿದೋ ತಿಳಿಯದೆಯೋ ತಪ್ಪಾಗಿದೆ. ಈ ತಪ್ಪಿಗಾಗಿ ಕ್ಷಮೆ ಕೇಳುತ್ತೇನೆ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ ಎಂದ ಅವರು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ,” ಎಂದು ತಿಳಿಸಿದ್ದಾರೆ.

ಸಿ.ಐ.ಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ ಪ್ರಕಾಶ್ ರಾಜ್ ಸಂಪೂರ್ಣ ಸಹಕಾರ ನೀಡಿದ್ದು, ತಮ್ಮ ಬ್ಯಾಂಕ್ ವಿವರಗಳನ್ನು ಸಹ ಒದಗಿಸಿದ್ದಾರೆ. ನಟ ರಾಣಾ ದಗ್ಗುಬಾಟಿ ಮತ್ತು ಮಂಚು ಲಕ್ಷ್ಮಿ ಸೇರಿದಂತೆ ಹಲವರ ವಿರುದ್ಧ ಕೂಡ ಈ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

 

Please Share: