ಶಿರಸಿ: ತಾಲೂಕಿನ ದಾಸನಕೊಪ್ಪ ಸಮೀಪದ ಧನಗನಳ್ಳಿ ಗ್ರಾಮದಲ್ಲಿ ವೃದ್ಧೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತಳಾಗಿ ಗುರುತಿಸಲ್ಪಟ್ಟವರು ಪುಟ್ಟವ್ವಾ ಮಲ್ಲಪ್ಪ ಅಗಸೆಬಾಗಿಲು (75). ಕಳೆದ ಹಲವು ವರ್ಷಗಳಿಂದ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಈಕೆ, ಅ.3ರಂದು ರಾತ್ರಿ ಬೇಸರಗೊಂಡು ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಪರಿಣಾಮ ದೇಹ ಸಂಪೂರ್ಣ ಸುಟ್ಟಿದ್ದು, ಗಂಭೀರ ಸ್ಥಿತಿಯಲ್ಲಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಸಾಗಿಸುವಾಗ ತಾರಗೊಡಿನ ಬಳಿ ಅ.4ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾಳೆ.
ಘಟನೆಯ ಕುರಿತು ಮೃತೆಯ ಪುತ್ರ ಕೃಷ್ಣಪ್ಪ ಮಲ್ಲಪ್ಪ ಅಗಸೆಬಾಗಿಲು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


