ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಆಶ್ರಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ವಿರುದ್ಧ ಠೇವಣಿದಾರರು ನೀಡಿದ ದೂರಿನ ಮೇಲೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ತನುಶ್ರೀ ಪಿ. ಗಾಂವಕರ ಅವರ ಪ್ರಕಾರ, ತಮ್ಮ ಹೆಸರಿನಲ್ಲಿ ತಂದೆ-ತಾಯಿ ಆಶ್ರಯ ಕ್ರೆಡಿಟ್ ಸೊಸೈಟಿಯಲ್ಲಿ ಮಾಡಿದ್ದ ಠೇವಣಿಯ ಮೆಚುರಿಟಿ ಅವಧಿ 2023ರ ಜನವರಿ 5ರಿಂದ 2024ರ ಡಿಸೆಂಬರ್ 28ರೊಳಗೆ ಮುಗಿದಿದ್ದರೂ, ಸುಮಾರು ₹1,20,71,987 ರಷ್ಟು ಮೊತ್ತವನ್ನು ಸೊಸೈಟಿ ಇದುವರೆಗೆ ಹಿಂತಿರುಗಿಸಿಲ್ಲ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸೊಸೈಟಿಯ ಅಧ್ಯಕ್ಷ ಬಾಬುರಾವ್ ಬಿ. ರಾಣೆ, ಮಾಜಿ ವ್ಯವಸ್ಥಾಪಕ ನೀಲೇಶ್ ಡಿ. ನಾಯ್ಕ್, ಉಪಾಧ್ಯಕ್ಷ ಆನಂದು ಎಫ್. ಗಾಂವಕರ್ ಸೇರಿದಂತೆ ನಿರ್ದೇಶಕರು – ದೇವಿದಾಸ್ ಎಸ್. ದೇಸಾಯಿ, ಗೋಪಿನಾಥ ಆರ್. ನಾಯ್ಕ್, ಕೃಷ್ಣ ಎಸ್. ನಾಯ್ಕ್, ಮಂಜುನಾಥ ಆರ್. ಪವಾರ, ರಾಮಕೇಶ್ ಶೆಡಗುಲ್ಕರ್, ರತ್ನಾಕರ ಎ. ನಾಯ್ಕ್, ರೂಪಾಲಿ ಡಿ. ದೇಸಾಯಿ, ರೇಷ್ಮಾ ಆರ್. ನಾಯ್ಕ್ ಮತ್ತು ಸಂದ್ಯಾ ಗಾಂವಕರ ಇವರ ಹೆಸರನ್ನೂ ದೂರಿನಲ್ಲಿ ಸೇರಿಸಲಾಗಿದೆ.
ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
