ಕರಾವಳಿ ವಾಯ್ಸ್ ನ್ಯೂಸ್

ಗೋಕರ್ಣ: ಇಲ್ಲಿನ ಓಂ ಬೀಚ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದ ಅವಘಡದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಸಾಗರ ಮೂಲದ ಪ್ರವಾಸಿಗನೊಬ್ಬನನ್ನು ಜೀವ ರಕ್ಷಕ ದಳದವರು ತಕ್ಷಣದ ಕಾರ್ಯಾಚರಣೆಯಲ್ಲಿ ಪಾರು ಮಾಡಿದ್ದಾರೆ.

ಮುಳುಗುವ ಹಂತದಿಂದ ರಕ್ಷಿಸಲ್ಪಟ್ಟವರು ವರುಣ ಸಾಗರ (23). ಗೋಕರ್ಣ ಬ್ಯಾಂಕ್ ಸಂಬಂಧಿತ ಕೆಲಸಕ್ಕಾಗಿ ಮೂವರು ಬಂದಿದ್ದಾಗ, ಸಂಜೆ ವೇಳೆ ಸಮುದ್ರದಲ್ಲಿ ಈಜಾಡುತ್ತಿದ್ದ ವರುಣ ಅಲೆಗಳ ತೀವ್ರ ಸುಳಿಗೆ ಸಿಲುಕಿ ತೀವ್ರ ಅಪಾಯಕ್ಕೆ ಒಳಗಾಗಿದ್ದರು.

ಸಮೀಪದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿ ಮಂಜೇಶ ಹರಿಕಂತ್ರ, ಪ್ರಭಾಕರ ಅಂಬಿಗ ಹಾಗೂ ಸ್ಥಳೀಯರ ಸಹಯೋಗದೊಂದಿಗೆ ಅವರನ್ನು ದಡಕ್ಕೆ ತಂದು ತುರ್ತು ನೆರವು ಒದಗಿಸಿದರು. ನಂತರ ಖಾಸಗಿ ಅಂಬುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಅಲ್ಲಿ ಡಾ. ಜಗದೀಶ ನಾಯ್ಕ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಜೀವರಕ್ಷಕ ದಳದ ಚುರುಕಿನ ಪ್ರಯತ್ನದಿಂದ ವರುಣ ಸಾಗರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

Please Share: