ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಮೋಟಾರ್ ಸೈಕಲ್ ವಿಚಾರವಾಗಿ ಉಂಟಾದ ವಿವಾದ ಹಲ್ಲೆ ಪ್ರಕರಣಕ್ಕೆ ತಿರುಗಿದ ಘಟನೆ ತಾಲೂಕಿನ ಬನವಾಸಿ ರಸ್ತೆ ಶ್ರೀನಗರ ಇಂಡಸ್ಟ್ರಿಯಲ್ ಏರಿಯಾ ಬಳಿ ನಡೆದಿದೆ.

ಪಿಗ್ಮಿ ಸಂಗ್ರಾಹಕಿ ಸಂಧ್ಯಾ ಮಹೇಶ ಗೌಡ್ರು ಹಾಗೂ ಆಕೆಯ ಮಗ ದರ್ಶನ್ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರ್ಶನ್ ಅವರು ಲೋಹಿತ್ ಮಡಿವಾಳ ಅವರಿಗೆ ಮೋಟಾರ್ ಸೈಕಲ್ ನೀಡಿದ್ದಾಗಿ ಹೇಳಲಾಗಿದ್ದು, ಬಳಿಕ ವಾಹನದಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಲೋಹಿತ್ ಮಡಿವಾಳ ಸಿಟ್ಟಿಗೆದ್ದಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲೋಹಿತ್ ಮಡಿವಾಳ, ಸಂತೋಷ ಗೌಡ ಹಾಗೂ ಸ್ವಸ್ತಿಕ ಮಡಿವಾಳ (ಎಲ್ಲರೂ ಶಿರಸಿ ತಾಲೂಕಿನ ಬಚಗಾಂವ ನಿವಾಸಿಗಳು) ಸೇರಿಕೊಂಡು ದರ್ಶನ್ ಮನೆ ಸಮೀಪಕ್ಕೆ ಬಂದು ಜಗಳವಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಮಗನ ಮೇಲೆ ಹಲ್ಲೆ ಯಾಕೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಲು ಬಂದ ತಾಯಿ ಸಂಧ್ಯಾ ಮಹೇಶ ಗೌಡ್ರು ಅವರ ಮೇಲೂ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ಸಂಬಂಧ ಶಿರಸಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

 

 

Please Share: