ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನ ಆವರಣದಲ್ಲಿ ಶನಿವಾರ ಸಂಜೆ ಕಸದ ರಾಶಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಯಿತು.
ಕಾಲೇಜು ಆವರಣದಲ್ಲಿ ಇತ್ತೀಚೆಗೆ ಮರವೊಂದರ ರೆಂಬೆಗಳನ್ನು ಕತ್ತರಿಸಿ ಒಣ ಎಲೆಗಳೊಂದಿಗೆ ಒಂದೇ ಜಾಗದಲ್ಲಿ ರಾಶಿ ಮಾಡಲಾಗಿತ್ತು. ರಾತ್ರಿ ಸುಮಾರು 7 ಗಂಟೆ ವೇಳೆಗೆ ಈ ರಾಶಿಯಲ್ಲಿ ಬೆಂಕಿಯ ಜ್ವಾಲೆಗಳು ಎದ್ದಿವೆ. ಬೆಂಕಿ ತೀವ್ರವಾಗಿ ಹಬ್ಬತೊಡಗುತ್ತಿದ್ದಂತೆ, ರಾತ್ರಿ ಪಾಳಿಯ ಕಾವಲು ಸಿಬ್ಬಂದಿ ನೀರು ಎರಚಿ ನಂದಿಸಲು ಪ್ರಯತ್ನಿಸಿದರೂ ಕಿಡಿ ನಿಯಂತ್ರಣಕ್ಕೆ ಬಂದಿಲ್ಲ.
ಜ್ವಾಲೆಗಳು ಕಟ್ಟಡದ ಮಟ್ಟಕ್ಕೆ ಏರಿ ಹಳೆಯ ಕಟ್ಟಡಕ್ಕೂ ಬೆಂಕಿ ತಗುಲುವ ಅಪಾಯ ಎದುರಾಗಿತ್ತು. ತಕ್ಷಣ ಸ್ಥಳೀಯರಿಂದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಶೀಘ್ರವಾಗಿ ನಂದಿಸಿ ಅನಾಹುತ ತಪ್ಪಿಸಿದರು.

