ಕರಾವಳಿ ವಾಯ್ಸ್ ನ್ಯೂಸ್

ಭಟ್ಕಳ: ಪಡಿತರ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ 7 ಮಂದಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದಲ್ಲಿ ಹಾಗೂ ಆಹಾರ ನಿರೀಕ್ಷಕ ಉದಯ ತಳವಾರ ಅವರ ಸಹಯೋಗದಲ್ಲಿ ನಡೆದ ದಾಳಿ ವೇಳೆ, 228 ಚೀಲಗಳಲ್ಲಿ ಒಟ್ಟು 11,400 ಕ್ವಿಂಟಲ್ ಅಕ್ಕಿಯನ್ನು ಪತ್ತೆಹಚ್ಚಲಾಗಿದೆ. ಇದರ ಮೌಲ್ಯ ಸುಮಾರು ರೂ. 3,87,600 ಎಂದು ಲೆಕ್ಕಿಸಲಾಗಿದೆ.

ಅಕ್ರಮ ಅಕ್ಕಿ ಸಾಗಿಸಲು ಬಳಸಲಾಗಿದ್ದ ಅಶೋಕ ಲೈಲೆಂಡ್ ಲಾರಿ, ಮಾರುತಿ ಓಮ್ಮಿ ಹಾಗೂ ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರು ಸಮೀರ ಮುಗಳಿಹೊಂಡ (ಗಣೇಶನಗರ), ಮಲ್ಲಿಕಾರ್ಜುನ ಆರ್. (ಮಾಗಡಿ ರಾಮನಗರ), ನಿತೀನ ಹೆಚ್.ಎನ್. (ಹೊಂಬೆಗೌಡನಹಳ್ಳಿ), ಸಬೂಲ್ ಮುಗಳಿಹೊಂಡ (ಗಣೇಶನಗರ), ಮಾರುತಿ ಓಮ್ಮಿ ವಾಹನದ ಮಾಲಿಕ, ಅಶೋಕ ಲೈಲೆಂಡ್ ದೋಸ್ತ್ ವಾಹನದ ಚಾಲಕ ಹಾಗೂ ಅಶೋಕ ಲೈಲೆಂಡ್ ದೋಸ್ತ್ ವಾಹನದ ಮಾಲಿಕರು.

ಈ ಬಗ್ಗೆ ಆಹಾರ ನಿರೀಕ್ಷಕ ಉದಯ ತಳವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪ್ರಕರಣ ದಾಖಲಾಗಿರುವುದು ಪೊಲೀಸರ ಮಾಹಿತಿ.

 

Please Share: