ಕರಾವಳಿ ವಾಯ್ಸ್ ನ್ಯೂಸ್

ಮಲ್ಪೆ: ಸಾರ್ವಜನಿಕ ಪ್ರವೇಶಕ್ಕೆ ನಿಷೇಧವಿರುವ ಮಲ್ಪೆ ಬಂದರು ವ್ಯಾಪ್ತಿಯ ದರಿಯಾ ಬಹದ್ದೂರ್ ದ್ವೀಪ ಭಾಗಕ್ಕೆ ಗಾಳ ಹಾಕಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಎಂಟು ಮಂದಿಯ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಮೊಹಮ್ಮದ್ ಹುಸೈನ್, ರೋಶನ್ ಜಮೀರ್, ಮಹಮ್ಮದ್ ಅನ್ಸರ್ ಬಶೀರ್, ಅಬು ಸನಾನ್, ಅಣ್ಣಪ್ಪ ಮಂಜುನಾಥ ದೇವಾಡಿಗ, ಮಹಮ್ಮದ್ ಫೈಜಾನ್ ಶೇಖ್ ಹಾಗೂ ಜಾವೇದ್ ಅಹಮದ್ ಎಂಬವರು ಆರೋಪಿಗಳಾಗಿದ್ದಾರೆ.

ನವೆಂಬರ್ 14ರಂದು ಸಂಜೆ 4 ಗಂಟೆಯ ಸುಮಾರಿಗೆ ಶೇಖರ ಕುಂದರ್ ಅವರ ಬೋಟಿನಲ್ಲಿ ದ್ವೀಪದ ಕಡೆಗೆ ತೆರಳಿ, ಸುಮಾರು 5.30ಕ್ಕೆ ವಾಪಾಸಾದ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿತ್ತು. ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ದ್ವೀಪಕ್ಕೆ ಅನಧಿಕೃತ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಮಲ್ಪೆ ಬಂದರು ಉಪ ಸಂರಕ್ಷಣಾಧಿಕಾರಿ ಅಂತೋನಿ ಫೆಲಿಕ್ಸ್ ಅವರ ಮನವಿಗಾಗಿ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 

 

Please Share: