ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ತಾಲೂಕಿನ ಮುಡಗೇರಿ ಡ್ಯಾಮ್ ಹತ್ತಿರದ ಅರಣ್ಯ ಪ್ರದೇಶದಲ್ಲಿ ಗೋವಾದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ದೊಡ್ಡ ಪ್ರಮಾಣದ ಮದ್ಯವನ್ನು ಅಬಕಾರಿ ಇಲಾಖೆ ಗುರುವಾರ ಬೆಳಿಗ್ಗೆ ನಡೆಸಿದ ದಾಳಿಯಲ್ಲಿ ಪತ್ತೆಹಚ್ಚಿದೆ. ಅಧಿಕಾರಿಗಳನ್ನು ಕಂಡ ಆರೋಪಿಗಳು ಸ್ಥಳದಲ್ಲಿಯೇ ಕಾಲ್ಕಿತ್ತಿದ್ದು ಪರಾರಿಯಾಗಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಬೆಳಿಗ್ಗೆ ಸುಮಾರು 9 ಗಂಟೆಗೆ ಅರಣ್ಯ ಪ್ರದೇಶದಲ್ಲಿ ಗಸ್ತು ನಡೆಸಿದ ಅಬಕಾರಿ ಸಿಬ್ಬಂದಿ, ಐದು ದ್ವಿಚಕ್ರ ವಾಹನಗಳಲ್ಲಿ ಮದ್ಯ ಸಾಗಾಟ ನಡೆಯುತ್ತಿರುವುದನ್ನು ಪತ್ತೆಮಾಡಿದರು. ಕಾರ್ಯಾಚರಣೆಯಲ್ಲಿ ಗೋವಾ ಪೆನ್ನಿ 304.830 ಲೀ, ಗೋವಾ ಮದ್ಯ 284.280 ಲೀ ಹಾಗೂ ಬಿಯರ್ 60.500 ಲೀ ಸೇರಿ ಒಟ್ಟು 649.610 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಮದ್ಯದ ಅಂದಾಜು ಮೌಲ್ಯ ರೂ. 3,62,350 ಆಗಿದೆ.

ಇದರ ಜೊತೆಗೆ ಮದ್ಯ ಸಾಗಣೆಗೆ ಬಳಸಲಾಗಿದ್ದ ರೂ. 4,00,000 ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಒಟ್ಟು ವಶಕ್ಕೆ ಬಂದ ವಾಹನ ಮೌಲ್ಯ ರೂ. 7,62,350 ಎಂದು ಅಬಕಾರಿ ಇಲಾಖೆ ತಿಳಿಸಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ.

ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ಅಧೀಕ್ಷಕರು ರಮೇಶ್ ಬಿ. ಭಜಂತ್ರಿ, ನಿರೀಕ್ಷಕರು ರಂಜೀತಕುಮಾರ ಮೀತ್ರಾ, ಉಪ ನಿರೀಕ್ಷಕರು ನಾಗರಾಜ ಕೊಟಗಿ, ಸಿಬ್ಬಂದಿ ಪ್ರವೀಣಕುಮಾರ ಕಲ್ಲೊಳ್ಳಿ, ಹೇಮಚಂದ್ರ ಈರಣ್ಣನವರ್, ವಿರೇಶ ಕುರಿಯವರ ಹಾಗೂ ದಿನಗೂಲಿ ಚಾಲಕರು ಇಮ್ಮಿಯಾಝ್ ಮತ್ತು ಪವನ ಮಸೂರಕರ ಭಾಗವಹಿಸಿದ್ದರು.

Please Share: