ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ’ ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಹೇಳಿದ್ದಾರೆ.

ಬಜೆಟ್ ಕುರಿತು ವಿಶ್ಲೇಷಿಸಿದ ಅವರು `ಕರಾವಳಿ ಸೇರಿ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡಿಸಲಾಗಿದೆ. ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಬಜೆಟ್ ಒತ್ತು ನೀಡಿದ್ದು ಆಶಾದಾಯಿಕ ಬೆಳವಣಿಗೆ’ ಎಂದು ಹೇಳಿದ್ದಾರೆ.

`ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಿಂದ ಅನೇಕ ಸಮಸ್ಯೆಗಳು ದೂರವಾಗಲಿದೆ’ ಎಂದವರು ಹೇಳಿದ್ದಾರೆ.

`ಮತ್ಸö್ಯ ಸಂಪದ ಯೋಜನೆ ಅಡಿ 55 ಲಕ್ಷ ಉದ್ಯೋಗ ಸೃಷ್ಠಿಗೆ ಒತ್ತು ನೀಡಿರುವುದರಿಂದ ನಿರುದ್ಯೋಗ ಸಮಸ್ಯೆ ದೂರವಾಗಲಿದೆ. ಇದರೊಂದಿಗೆ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯವನ್ನು ಬಲಪಡಿಸುವ ಮೂಲಕ ಆರ್ಥಿಕತೆಯನ್ನು ವಿಸ್ತರಿಸುವ ಗುರಿಯೂ ಉದ್ಯೋಗ ಸೃಷ್ಠಿಗೆ ನೆರವು ನೀಡಲಿದೆ. ಒಳನಾಡು ಮತ್ತು ಕರಾವಳಿ ಮೀನುಗಾರಿಕೆಗೆ ಆಧುನಿಕ ತಂತ್ರಜ್ಞಾನ ಹಾಗೂ ಮೂಲಸೌಕರ್ಯ, ಕರ್ನಾಟಕದ ಅಣೆಕಟ್ಟುಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಬಗ್ಗೆ ಸಚಿವರು ಬಜೆಟಿನಲ್ಲಿ ವಿವರಿಸಿದ್ದು, ಈ ಬಜೆಟ್ ಜನಪರ ಕಾಳಜಿಯನ್ನು ಹೊಂದಿದೆ’ ಎಂದು ಗಣಪತಿ ಉಳ್ವೇಕರ್ ಅವರು ಹರ್ಷವ್ಯಕ್ತಪಡಿಸಿದ್ದಾರೆ.

Please Share: