ಶಿರಸಿ: ಚಾಲಕನ ಅಜಾಗೂರತೆಯಿಂದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಡಿಕೆ ತೋಟದಲ್ಲಿ ಮುಗುಚಿ ಬಿದ್ದ ಘಟನೆ ಗುರುವಾರ ರಾತ್ರಿ ಶಿರಸಿ(sirsi) –ಹುಬ್ಬಳ್ಳಿ(Hubl) ರಸ್ತೆಯ ಹುಡೇಲಕೊಪ್ಪ ಬಸ್ ನಿಲ್ದಾಣದ ಬಳಿ ನಡೆದಿದೆ.

ವಿಆರ್‌ಎಲ್ ಸಂಸ್ಥೆಯ ಲಾರಿಯನ್ನು ಚಲಾಯಿಸುತ್ತಿದ್ದ ಚಾಲಕ ಸತ್ಯನಾರಾಯಣ ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ತುಂಬಿದ 400 ಚೀಲಗಳ ಸಾಗಣೆಗೆ ಹೊರಟಿದ್ದರು. ರಾತ್ರಿ 9:30 ಗಂಟೆ ಸುಮಾರಿಗೆ ಹುಡೇಲಕೊಪ್ಪದ ಬಳಿ ರಸ್ತೆ ತಿರುವಿನಲ್ಲಿ ಆತ ವೇಗವಾಗಿ ಚಾಲನೆ ಮಾಡುತ್ತಿದ್ದು, ರಸ್ತೆಯಲ್ಲಿ ನಡೆಯುತ್ತಿದ್ದ ಕಾಮಗಾರಿ ಕಡೆ ಗಮನಿಸದೇ ನಿಯಂತ್ರಣ ತಪ್ಪಿ ಲಾರಿಯನ್ನು ತೋಟಕ್ಕೆ ಮುಗುಚಿಸಿದ್ದಾನೆ.

ಅಪಘಾತದಲ್ಲಿ ಲಾರಿಯ ಮುಂದೆ ಕುಳಿತಿದ್ದ ಪಿರ್ಯಾದಿದಾರನಿಗೆ ಬೆನ್ನು ಹಿಂದೆ ಹಾಗೂ ಹಣೆಯ ಹತ್ತಿರ ಸಣ್ಣಪುಟ್ಟ ಗಾಯವಾಗಿದ್ದು, ಚಾಲಕನ ಎಡಗೈ, ಬಲಗೈ ಮುಂಗೈ ಹಾಗೂ ಕಾಲುಗಳಲ್ಲಿ ಗಾಯಗಳಾಗಿವೆ. ಲಾರಿಯು ಸಂಪೂರ್ಣವಾಗಿ ಜಖಂಗೆ ಒಳಗಾಗಿದೆ.

ಘಟನೆ ಸಂಬಂಧ ಶಿರಸಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಮಾಂತೇಶ್ ಕುಂಬಾರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

Please Share: