ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತಾಲೂಕಿನ ಹಳಗೆಜೂಗ್ ಹಾಗೂ ಹಣಕೋಣಜೂಗದಲ್ಲಿ ಕಂದಾಯ ಇಲಾಖೆ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 47 ಟನ್ ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ.

Banner Ad

ಹಳಗೆಜೂಗ್‌ನಲ್ಲಿ ಸಂಗ್ರಹಿಸಿಟ್ಟಿದ್ದ 15 ಟನ್ ಹಾಗೂ ಹಣಕೋಣಜೂಗ್‌ನಲ್ಲಿ ಸಂಗ್ರಹಿಸಿಟ್ಟಿದ್ದ 30 ಟನ್ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮರಳನ್ನು ಘಾಡಸಾಯಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಆರೋಗ್ಯ ಕೇಂದ್ರದ ಕಾಮಗಾರಿಗೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಪಡೆದು ನೀಡಲಾಗಿದೆ.

ಇದಲ್ಲದೆ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಬೊಲೆರೋ ವಾಹನವನ್ನು ವಶಪಡಿಸಿಕೊಂಡು ₹14,625 ದಂಡ ಸಂಗ್ರಹಿಸಲಾಗಿದೆ.

ತಹಶೀಲ್ದಾರ್ ನಿಶ್ಚಲ ನರೋನ್ಹಾ ಅವರ ಸೂಚನೆಯಂತೆ ಆರ್‌ಐ ಪ್ರಸಾದ ಗಾಂವಕರ, ಗ್ರಾಮ ಲೆಕ್ಕಾಧಿಕಾರಿ ಶುಭಶ್ರೀ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಯೋಲಾಜಿಸ್ಟ್ ಕೃಷ್ಣಮೂರ್ತಿ ಕಾರ್ಯಾಚರಣೆ ನಡೆಸಿದರು.

 

 

 

 

 

Please Share: