ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 1.26 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಸೋಮವಾರ ಚಿತ್ತಾಕುಲ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ಮೂಲದ ನಾರಾಯಣ ಗಜಾನನ ದಲಬಂಜನ (ಆರೋಪಿ) ಮುಡಗೇರಿ ಕಡೆಯಿಂದ ಸದಾಶಿವಗಡದತ್ತ ಸ್ಕಾರ್ಪಿಯೋ ವಾಹನದಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಚಿತ್ತಾಕುಲ ಪೊಲೀಸರು ಚಿಂಚೇವಾಡದ ಐಸ್ ಫ್ಯಾಕ್ಟರಿ ಬಳಿ ದಾಳಿ ನಡೆಸಿ, ವಾಹನದಲ್ಲಿದ್ದ ಅಕ್ರಮ ಮದ್ಯ ಹಾಗೂ ಆರೋಪಿಯನ್ನು ವಶಕ್ಕೆ ಪಡೆದರು.

ಈ ಕಾರ್ಯಾಚರಣೆಯಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಸೈ ಪರಶುರಾಮ ಮಿರ್ಜಗಿ, ಎಎಸ್‌ಐ ಸಂತೋಷ ಟಿ. ನಾಯ್ಕ ಹಾಗೂ ಸಿಬ್ಬಂದಿಗಳಾದ ಗೌತಮ ರೊಡ್ಡನವರ, ವಿನಯ ಕಾಣಕೋಣಕರ, ಬಸಪ್ಪಾ ಕಿತ್ತೂರ, ಅಭಿಜಿತ್ ಆರ್.ಎಲ್. ಮತ್ತು ಪ್ರದೀಪ ಭಾಗವಹಿಸಿದ್ದರು.

ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

 

Please Share: