ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ತಾಲೂಕಿನ ಕೆಕೆ ಹಳ್ಳಿ ಗ್ರಾಮದಲ್ಲಿ ‘ಮೊಬೈಲ್ ಕೊಡಲಿಲ್ಲ’ ಎನ್ನುವ ಮನಸ್ತಾಪವನ್ನು ಮನಸ್ಸಿಗೆ ಹಚ್ಚಿಕೊಂಡ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರರಂದು ನಡೆದಿದೆ.
ಪ್ರೀತಂ ನಾಗರಾಜ ಮಾಳ್ವಿ (15) ಎಂಬ ವಿದ್ಯಾರ್ಥಿಯೇ ಮೃತ ದುರ್ದೈವಿ. ಮೊಬೈಲ್‌ಗಾಗಿ ತೀವ್ರ ವ್ಯಾಮೋಹ ಹೊಂದಿದ್ದ ಪ್ರೀತಂ, ಹೊಸ ಮೊಬೈಲ್ ಕೊಡಿಸಲು ಪಾಲಕರಿಗೆ ನಿರಂತರ ಒತ್ತಾಯ ಮಾಡುತ್ತಿದ್ದ. ಆದರೆ ತನ್ನ ಮಗ ಮೊಬೈಲ್‌ಗೆ ಮತ್ತಷ್ಟು ಬಲಿಯಾಗಿ ಹೋಗಬಾರದೆಂದು ಪಾಲಕರು ಕಟ್ಟುನಿಟ್ಟಿನ ನಿಲುವು ತೆಗೆದುಕೊಂಡಿದ್ದರು. ಇದರಿಂದ ಬೇಸತ್ತು ವಿದ್ಯಾರ್ಥಿ ಮನನೊಂದುಕೊಂಡಿದ್ದನು.
ಮನೆಯವರು ಹೊರಗಿದ್ದ ಸಮಯದಲ್ಲಿ, ಅಡುಗೆ ಮನೆಯೊಳಗೆ ಮೊಬೈಲ್ ಹುಡುಕಿದರೂ ಸಿಗದೆ ಬೇಸರಗೊಂಡ ಪ್ರೀತಂ, ಅಷ್ಟರಲ್ಲೇ ಪ್ಲಾಸ್ಟಿಕ್ ಹಗ್ಗದಿಂದ ಮರದ ಜಂತಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕುಟುಂಬಸ್ಥರು ಕಂಡ ಕೂಡಲೇ ಆಘಾತಗೊಂಡು ನೆರವಿಗೆ ಧಾವಿಸಿದರೂ ಪ್ರಾಣ ಉಳಿಸಲಾಗಲಿಲ್ಲ.
ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

