ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ತಂದೆ ಪಡೆದಿದ್ದ ಸಾಲ ಮರುಕಳಿಸದ ವಿಚಾರದ ನಿಮಿತ್ತ, ಮನೆಯಲ್ಲಿದ್ದ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಶಿರಸಿ ಮೂಲದ ಮತೀನ್ ಅಬ್ದುಲ್ ಗಫಾರ ಎನ್ನುವ ವ್ಯಕ್ತಿಯೇ ಈ ಮೃಗೀಯ ಕೃತ್ಯಕ್ಕೆ ಆರೋಪಿ. ಕುಟುಂಬದಿಂದ ಸಾಲ ವಾಪಸ್ ಪಡೆಯಲು ಮಂಗಳವಾರ ಸಾಯಂಕಾಲ ಬಾಲಕಿಯ ಮನೆಯಲ್ಲಿ ಹೋದಾಗ, ಆ ಸಮಯದಲ್ಲಿ ಮನೆಯವರು ಯಾರೂ ಇಲ್ಲವೆಂದು ಹೇಳಿದ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ದೌರ್ಜನ್ಯಕ್ಕೆ ಒಳಪಡಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ಬಗ್ಗೆ ಬಾಲಕಿ ತಾಯಿಗೆ ತಿಳಿಸಿರುವ ನಂತರ, ತಾಯಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೌರ್ಜನ್ಯ ಎಸಗಿ ಪರಾರಿಯಾದ ಆರೋಪಿ ಮತೀನ್ ಗಫಾರನಿಗಾಗಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.
ಈ ಘಟನೆ ಸ್ಥಳೀಯವಾಗಿ ಭಾರೀ ಖಂಡನೆಗೆ ಗ್ರಾಸವಾಗಿದೆ.

